ಅಭಿಪ್ರಾಯ / ಸಲಹೆಗಳು

ಉರುಮೆ ವಾದನ

ಉರುಮೆ ವಾದ್ಯಕ್ಕೆ “ಹರೆ” ಎಂದೂ ಕರೆಯುತ್ತಾರೆ. ಮಾರಿ ದೇವಾಲಯಗಳಿದ್ದ ಊರುಗಳಲ್ಲಿ ಈ ವಾದ್ಯ ಸಾಮಾನ್ಯವಾಗಿ ಇದ್ದೇ ಇರುತ್ತದೆ.

 ದಕ್ಷಿಣ ಕರ್ನಾಟಕದ ಚಿತ್ರದುರ್ಗ,ತುಮಕೂರು, ಬೆಂಗಳೂರು, ಮಂಡ್ಯ ಮುಂತಾದ ಜಿಲ್ಲೆಗಳಲ್ಲಿ ಉರುಮೆ ವಾದ್ಯವನ್ನು ಗಂಡಸರು ನುಡಿಸುತ್ತಾರೆ. ಕೆಲವು ಕಡೆ ಇದನ್ನೇ “ಅರೆ ವಾದ್ಯ” ಎನ್ನುತ್ತಾರೆ.ಉರುಮೆ ಅಥವಾ ಅರೆ ಬಾರಿಸುವ ಕಲಾವಿದರು ಇದನ್ನೇ ವೃತ್ತಿಯಾಗಿಸಿ ಕೊಂಡಿದ್ದಾರೆ. ಮಾರಿ ಉತ್ಸವಗಳಲ್ಲಿ ಹಬ್ಬ ಜಾತ್ರೆಗಳಲ್ಲಿ ಉರುಮೆ  ಇರಲೇಬೇಕು. ದುರುಗ ಮುರುಗಿ ವಾದ್ಯ ಎಂದೂ ಇದನ್ನು ಕರೆಯುತ್ತಾರೆ.

 ಡೊಳ್ಳಿನ ಆಕೃತಿಯಂತೆ ಕಂಡರೂ ಇದರ  ನಾದ ಬೇರೆ ತೆರನಾಗಿರುತ್ತದೆ. ರುಮ್ ರುಮ್ ಎಂದು ನುಡಿಯುವುದರಿಂದ  ಇದಕ್ಕೆ ಈ ಹೆಸರೂ ಬಂದಿದೆ.

 

ಎರಡು ಅಂಗುಲದ, ಎಂಟು ಸುತ್ತಳತೆಯುಳ್ಳ  ಬೇವಿನ ಕಟ್ಟಿಗೆಯ ಅಥವಾ ಕಂಚು, ಹಿತ್ತಾಳೆಯ ಈ ಪಡಗ ಮಧ್ಯದಲ್ಲಿ ಸ್ವಲ್ಪ ಇಳಿಜಾರಾಗಿರುತ್ತದೆ. ಎರಡೂ ಕಡೆಗೂ ಹದಮಾಡಿದ ಆಡಿನ ಅಥವಾ ಕುರಿ ಚರ್ಮದ ಮುಚ್ಚಳಿಕೆಯನ್ನು ಮುಚ್ಚಿ ನೂಲಿನಿಂದ ಬಿಗಿದಿರುತ್ತಾರೆ. ಬಲಗಡೆ ಬಾಡಿಸಲು ತುದಿಗೆ ಬಾಗಿದ ಹೊನ್ನಾವರಿ ಕಟ್ಟಿಗೆಯ ಗುಣಿಕೆಯನ್ನು ಎಡಗಡೆ ಬಾರಿಸಲು ಈಚಲಗರಿಯ ಚಪ್ಪಟೆಯಾದ ಸ್ವಲ್ಪ ಬಾಗಿದ ಗುಣಿಕೆಯನ್ನೂ ಉಪಯೋಗಿಸುತ್ತಾರೆ. ಎಡ ಮುಚ್ಚಳಿಕೆಗೆ ಔಡಲ ಬೀಜ ಬಜ್ಜಿ, ಬೂದಿಯಲ್ಲಿ ಕಲಿಸಿ ಗಸಿಮಾಡಿ ಹಚ್ಚಿರುವುದರಿಂದ ಮಂದ್ರ ನಾದ ಕೊಡುತ್ತದೆ. ಗುಣಿಕೆಯಿಂದ ಮೇಲೆ ಕೆಳಗೆ ಒಂದೇ ರೀತಿಯ ಲಯಕ್ಕೆ ತಕ್ಕಂತೆ ತಿಕ್ಕುವುದರಿಂದ ರುಮ್ ರುಮ್ ನಾದ ಕೊಡುತ್ತದೆ. ಪೋತುರಾಜನ ಆವೇಶಭರಿತನಾದ ಕುಣಿತಕ್ಕೆ ಉರುಮೆ ವಾದ್ಯ ರೌದ್ರತೆಯನ್ನು ನೀಡುತ್ತದೆ.

 

ಎರಡು ಅಥವಾ ನಾಲ್ಕು ಉರುಮೆಯವರು ಒಟ್ಟಿಗೆ ಸೇರಿ “ ಉರುಮೆ ಮೇಳ” ಏರ್ಪಡಿಸುವುದು ಉಂಟು. ಮಧ್ಯೆ ಮಧ್ಯೆ ಮಾರಿಯ ಪದಗಳನ್ನು ಹೇಳುತ್ತಾ ವಿವಿಧ ಲಯ ಮತ್ತು ಗತಿಗಳಲ್ಲಿ ಉರುಮೆಯನ್ನು ನುಡಿಸುವಾಗ ನಮ್ಮದಲ್ಲದ ಅಲೌಕಿಕ ಜಗತ್ತೊಂದು ನಿರ್ಮಾಣವಾದಂತೆ ಭಾಸವಾಗುತ್ತದೆ.

ಇತ್ತೀಚಿನ ನವೀಕರಣ​ : 19-01-2024 04:29 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಜಾನಪದ ಅಕಾಡೆಮಿ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080